Monday, October 25, 2010


 ಕಾಣದ ಗೆಳತಿಯೇ ಕೇಳೆ ನಿನಗಾಗಿ ಬರೆದ ಕವನ
ಕಾಣನೆಂಬ ಕಾರಣಕ್ಕೆ ಮರೆಯದಿರು ನೀ ನನ್ನ

ಮನಬಿಚ್ಚಿ ಹೇಳುತ್ತೀನಿ ಕಿವಿಗೊಟ್ಟು ಕೇಳುತ್ತಿಯಾ
ನಾನೊಬ್ಬ ಭಾವಜೀವಿ ಜೊತೆ-ಜೊತೆಗೆ ಸ್ನೇಹಜೀವಿ

ಭಾವನೆಗಳ ಲೋಕದಲ್ಲಿ ಕನಸಿನ ಕಾಮನಬಿಲ್ಲಿನ ಮೇಲೆ
ನನ್ನ ಬದುಕು
ನೀ ಸ್ನೇಹಜೀವಿಯಾದರೆ ಕಳಿಸೆನ್ನ ಲೋಕಕ್ಕೊಂದು
ನಿನ್ನ ನೆನಪು
ಮನಬಿಚ್ಚಿ ನಾ ನುಡಿವೆ ನನ್ನ ಭಾವನೆ ನೂರು
ಸವಿನೆನಪಲ್ಲೇ ಕಟ್ಟಿ ಕೊಡುವೆ ಸ್ನೇಹವೆಂಬ ತೇರು

ತೆರೆದ ಹೃದಯದಲ್ಲಿ ನಿನಗಾಗಿ ಬರೆದಿರುವೆ ಈ ಓಲೆ
ಮನಸಿಟ್ಟು ಪ್ರೀತಿಯಿಂದ ನೀನಿದನು ಓದು ಬಾಲೆ

ನಿನಗಿಷ್ಟವಾದರೆ ಈ ಕವನ,ನಿನಗಿದೋ ನನ್ನ ನಮನ !!!!!!!!!!